'ಕರ್ಣಾಟಕ ಸಂಘ, ಮುಂಬಯಿ' ಸುಮಾರು ೮೦ ವರ್ಷಗಳಿಂದ ಮುಂಬಯಿ ಕನ್ನಡಿಗರ ಸಾಂಸ್ಕೃತಿಕ ಕೇಂದ್ರವಾಗಿ ಕನ್ನಡ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಸೇವೆ ಮಾಡುತ್ತಾ ಬಂದಿದೆ. ೨೦೦೬ ರಿಂದ 'ಸಾಹಿತ್ಯ ಸಂಸ್ಕೃತಿ ಸಮಾವೇಶ' ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಸಂಘವು ಹೊರನಾಡಿನಲ್ಲಿ ಕನ್ನಡದ ನಾಡು-ನುಡಿ-ಸಾಹಿತ್ಯ-ಸಂಸ್ಕೃತಿ-ಸಂಘಟನೆ-ಶಿಕ್ಷಣ-ರಂಗಭೂಮಿ-ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಮೂವರು ಸಾಧಕರಿಗೆ ಸಂಘದ 'ಸಾಧನ ಶಿಖರ ಪ್ರಶಸ್ತಿ' ಪುರಸ್ಕಾರವನ್ನು ನೀಡಲಾಗುತ್ತಿದೆ. ಈ ಪುರಸ್ಕಾರವು, ಸ್ಮರಣಿಕೆ, ಪ್ರಶಸ್ತಿ ಪತ್ರ, ಶಾಲು, ಫಲ-ಪುಷ್ಪ, ಹಾಗೂ ೧೦,೦೦೦ ರೂಪಾಯಿಗಳ ನಗದು ಬಹುಮಾನವನ್ನು ಹೊಂದಿರುತ್ತದೆ. ಈಗಾಗಲೇ ಈ ಪ್ರತಿಷ್ಠಿತ ಪುರಸ್ಕಾರವನ್ನು ಪಡೆದ ವ್ಯಕ್ತಿಗಳ ಹೆಸರುಗಳು ಹೀಗಿವೆ : ಶ್ರೀ.ಬಿ. ಎಸ್. ಕುರ್ಕಾಲ್ ಡಾ. ಜಿ. ವಿ. ಕುಲಕರ್ಣಿ, ಸುಶೀಲಾ ಆಚಾರ್ಯ, ಎಂ. ಎನ್. ಸುವರ್ಣ, ಶ್ರೀ.ಸದಾನಂದ ಸುವರ್ಣ, ಡಾ.ಬಿ.ಆರ್.ಮಂಜುನಾಥ್, ಡಾ. ಸಂಜೀವ ಶೆಟ್ಟಿ, ವಿದುಷಿ ಉಮಾ ನಾಗಭೂಷಣ, ಬಿ.ಎ.ಸನದಿ ಡಾ. ವಿಶ್ವನಾಥ ಕಾರ್ನಾಡ್, ಶ್ರೀಮತಿ. ಕುಂದಾ ರೇಗೆ,